சித்தர்கள் போற்றி தொகுப்பு தெலுங்கில் | sithargal potri thoguppu in Telugu language | Siddha prayer book in Telugu | importance of prayer | power of prayer

சித்தர்கள் போற்றி தொகுப்பு தெலுங்கில்  | sithargal potri thoguppu in Telugu language | Siddha prayer book in Telugu | importance of prayer | power of prayer

ಸತ್ಯವೇ ಅಗತ್ಯ
ಉಜ್ವಲ ಕೃಪಾ ಜ್ಯೋತಿ ಉಜ್ವಲ ಕೃಪಾ ಜ್ಯೋತಿ
ಓಂ ಅಗಸ್ಯರ ಕೃಪೆ
ಜಯವೇ ಆಗತ್ಯ
ವಿಷಕೃಪಾಕಟಾಕ್ಷ, ಉಜ್ಜಲ ಕೃಪಾ ಜ್ಯೋತಿ!!

ಮಹಾನ್ ಅಗಸ್ಯರು ಜಗನ್ನಾಯಕ
ಮಹಾತಪಸ್ಸಿ ಮಹಾನ್ ಸುಬ್ರಹ್ಮಣ್ಯರು
ಅರಂಗಮಾದೇಸಿಕ‌ ಸ್ವಾಮಿಗಳು

ಶ್ರೀ ಅಗತ್ತಿಯರ್ ಸನ್ಮಾರ್ಗ ಸಂಘ
*”ಓಂಕಾರ ಕುಡಿಲ್” ತುರೈಯೂರ್ = 621010 ತಿರುಚಿ, ದೂರವಾಣಿ : 0431-7255184
Home Page www.agathiar.org Email : kudil@agathiar.co.in 
ಈ ಪ್ರಕಾಶನವು ದೈವೀಕವಾದುದು. ಇದನ್ನು ಕಾಪಾಡಿಕೊಳ್ಳುವುದು ಒಳ್ಳೆಯದು.

ಸಂಘದ ಅಧ್ಯಕ್ಷರು : ಶಿವರಾಜಯೋಗಿ, ಪರಮಾನಂದ ಸದಾಶಿವ ಸದ್ಗುರು
ತಪಸ್ಸಿ ಅರಂಗಮಾದೇಸಿಕ‌ ಸ್ವಾಮಿ ಗಳವರ

ಉಪದೇಶಜ್ಞಾನ ಕೈಪಿಡಿ
ಓಂ ಸುಬ್ರಪಣ್ಯ ಪಾದಾರವಿಂದಾಯ ನಮಃ
ಓಂ ಅಗಸ್ಯರ ಪಾದಾರವಿಂದಾಯ ನಮಃ
ಓಂ ನಂದೀಶರ ಪಾದಾರವಿಂದಾಯ ನಮಃ
ಓಂ ತಿರುಮೂಲದೇವರ ಪಾದಾರವಿಂದಾಯ ನಮಃ
ಓಂ ಕರುವೂರ್ ಮುನಿವರ ಪಾದಾರವಿಂದಾಯ ನಮಃ
ಓಂ ರೋಮ ಋಷಿಯವರ ಪಾದಾರವಿಂದಾಯ ನಮಃ
ಓಂ ಪತಂಜಲಿ ಮುನಿವರ ಪಾದಾರವಿಂದಾಯ ನಮಃ
ಓಂ ಭೋಗ ಮಹರ್ಷಿಗಳ ಪಾದಾರವಿಂದಾಯ ನಮಃ
ಓಂ ಕಮಲಮಾ ಮುನಿವರ ಪಾದಾರವಿಂದಾಯ ನಮಃ
ಓಂ ಶಿವವಾಕಿಯರ ಪಾದಾರವಿಂದಾಯ ನಮಃ
ಓಂ ಇಡೈಕ್ಕಾಡರ ಪಾದಾರವಿಂದಾಯ ನಮಃ
ಓಂ ಘೋರಕರ್ ಮಹರ್ಷಿ ಪಾದಾರವಿಂದಾಯ ನಮಃ
ಓಂ ಭುಜಂಡ ಮಹರ್ಷಿ ಪಾದಾರವಿಂದಾಯ ನಮಃ
ಓಂ ಮಾಣಿಕ್ಯವಾಚಕರ ಪಾದಾರವಿಂದಾಯ ನಮಃ
ಓಂ ತಿರುನಾವುಕ್ಕರಸರ ಪಾದಾರವಿಂದಾಯ ನಮಃ
ಓಂ ತಿರುಜ್ಞಾನ ಸಂಬಂಧರ ಪಾದಾರವಿಂದಾಯ ನಮಃ
ಓಂ ಸುಂದರರ ಪಾದಾರವಿಂದಾಯ ನಮಃ
ಓಂ ಶ್ರೀ ರಾಮಲಿಂಗ ಸ್ವಾಮಿಯವರ ಪಾದಾರವಿಂದಾಯ ನಮಃ

ಮೇಲ್ಕಂಡ 18 ಜ್ಞಾನಿಗಳೂ ಜೀವಕಾರುಣ್ಯಶೀಲರು ಮತ್ತು ಮಹಾನ್ ಮುನಿವರ್ಯರಾಗಿರುತ್ತಾರೆ. ಇವರ ನಾಮಗಳನ್ನು ಪ್ರತಿದಿನವೂ ಬ್ರಾಹಿ

ಕಾಲದಲೆದ್ದು ನಿತ್ಯ ಕರ್ಮಾನುಷ್ಠಾನುಗಳನ್ನು ಮುಗಿಸಿ, ಒಂದು ದೀಪವನ್ನು ಹಚ್ಚಿ ಸುವಾಸನೆಯುಳ್ಳ ಧೂಪವನ್ನು ಹಚ್ಚಿ ಸಮತಟ್ಟಾದ ಸ್ಥಳದಲ್ಲಿ ಬಿಳಿ

ವಸ್ತ್ರಗಳನ್ನು ಧರಿಸಿ ಕುಳಿತು (ದಿಕ್ಕು ಮುಖ್ಯವಲ್ಲ ಭಕ್ತಿಯೇ ಮುಖ್ಯ) ಬೆಳಿಗ್ಗೆ 30 ನಿಮಿಷ, ಸಂಜೆ 30 ನಿಮಿಷ ಮತ್ತು ಸಾಧ್ಯವಾದರೆ ರಾತ್ರಿ 12 ಗಂಟೆಗೆ 30

ನಿಮಿಷ ನಾಮ ಜಪವಾದ ಪೂಜೆಯನ್ನು ಮಾಡುತ್ತಾ ಬಂದರೆ ಹಿಂದಿನ ಪಾಪಗಳು ತೀರುತ್ತವೆ, ಪುಣ್ಯವು ಹೆಚ್ಚಾಗುತ್ತದೆ, ಐಶ್ವರ್ಯ ಹೆಚ್ಚುತ್ತದೆ. ಮೇಲಾಗಿ

ರೋಗವಿಲ್ಲದ ಜೀವನ, ದೀರ್ಘಾಯಸ್ಸು ಉಂಟಾಗುವುದು, ಕುಟುಂಬದಲ್ಲಿ ಹೊಂದಾಣಿಕೆಯುಂಟಾಗುತ್ತದೆ, ಸದ್ಗುಣವುಳ್ಳ ಪುತ್ರಭಾಗ್ಯ ದೊರಕುತ್ತದೆ ಮತ್ತು

ಗಂಡಸರಿಗೂ, ಹೆಂಗಸರಿಗೂ ವಿವಾಹ ಯೋಗಕ್ಕೆ ಇರುವ ತಡೆಗಳು ನಿವಾರಣೆಯಾಗುತ್ತದೆ. ಮೇಲಾಗಿ ವಿದ್ಯಾಭಿವೃದ್ಧಿ, ಉದ್ಯೋಗಾವಕಾಶಗಳೂ

ದೊರಕುತ್ತವೆ. ತೀರಿಸಲಾಗದ ಸಾಲದ ಹೊರೆಯೂ ತೀರುತ್ತದೆ ಮತ್ತು ಕೃಷಿ, ಉದ್ಯೋಗ, ವ್ಯಾಪಾರವು ಉತ್ತಮವಾಗಿ ನಡೆಯುವುದು ಬಗೆಹರಿಯದ

ಶತ್ರುತ್ವವು ತೀರುತ್ತದೆ. ಯೋಗ್ಯವಾದ ಮಿತೃತ್ವ ಏರ್ಪಡುತ್ತದೆ. ದುಶ್ಚಟಗಳಿದ್ದರೂ ತೊಲಗುತ್ತವೆ. ಯಾವುದನ್ನಾದರೂ ಸರಿಯಾಗಿ ಆಲೋಚಿಸದೆ

ಸಂದೇಹಪಡುವುದು ತಪ್ಪು ಎಂದು ಅರಿವಾಗುತ್ತದೆ. (ಕ್ಯಾನ್ಸರ್‌ನೋವಿಗಿಂತಲೂ ಈ ಅನುಮಾನದ ನೋವಿನಿಂದಾಗುವ ತೊಂದರೆಗಳು

ತೀವ್ರವಾಗಿರುತ್ತದೆ), ಮಾಂಸಾಹಾರ ಹಾಗೂ ಇನ್ನೂ ಹಲವು ಕೆಟ್ಟ ಅಭ್ಯಾಸವೂ ಬಿಟ್ಟು ಹೋಗುತ್ತದೆ. ಹಸಿದವರ ಹಸಿವನ್ನು ನೀಗಿಸುವುದರಿಂದ ಈ

ಜನ್ಮವು ಸಾರ್ಥಕಗೊಳ್ಳಲು ಸಹಾಯವಾಗುತ್ತದೆ.
ಮೇಲಾಗಿ ನಾಮ ಜಪ ಮಾಡಿದರೆ ಪರರ ಹಸಿವನ್ನು ನೀಗಿಸುವ ಚಿಂತನೆಯಂಟಾಗುತ್ತದೆ. ಪುಣ್ಯವನ್ನು ಹೆಚ್ಚಿಸಿಕೊಳ್ಳಬೇಕೆಂಬ

ಅಪೇಕ್ಷೆಯುಂಟಾಗುತ್ತದೆ. ಜೀವದಯೆಯೇ ಜನ್ಮವನ್ನು ಸಾರ್ಥಕಗೊಳಿಸುತ್ತದೆ ಎಂಬ ವಿಶೇಷ ಅರಿವುಂಟಾಗುತ್ತದೆ. ನಾವು ಮಾಡುವ ಕಾರ್ಯಗಳಲ್ಲಿ

ಯಾವುದು ಪಾಪ ಯಾವುದು ಪುಣ್ಯವೆಂಬ ತಿಳುವಳಿಕೆಯುಂಟಾಗುತ್ತದೆ. ಮೇಲಾಗಿ ಸ್ಫೂಲದೇಹ ಮತ್ತು ಸೂಕ್ಷ್ಮದೇಹ ಇವೆರಡರ ಬಗ್ಗೆಯೂ ಮತ್ತು ಈ

ಎರಡಕ್ಕೂ ಕಾರಣವಾದ ಪ್ರಕೃತಿ ದೇವರ ಬಗ್ಗೆಯೂ ಅರಿವು ಉಂಟಾಗುವುದು. ಪ್ರಕೃತಿ ದೇವರ ಕಾರ್ಯವೈಖರಿಯನ್ನು ಅರಿತರೆ ಆತ್ಮದ ತಪ್ಪು

ತಿಳುವಳಿಕೆಗೆ ದೇಹವೇ ಕಾರಣವೆಂದು ತಿಳಿದುಕೊಳ್ಳಬಹುದು. ಅಹಂಕಾರ, ಮಾಯೆ ಮತ್ತು ಕಾಮೂನೆಗಳು ಕಳೆದರೆ ಆತ್ಮಜ್ಞಾನ ಪಡೆದು ಆತ್ಮಜ್ಯೋತಿ

ಬೆಳಗುತ್ತದೆ. ಅದುವೇ ಮೋಕ್ಷವಾಗುವುದು.

ಸೂಚನೆ – 1 : ಮೇಲ್ಕಂಡ 18 ಜ್ಞಾನಿಗಳ ಆಶೀರ್ವಾದವನ್ನು ಪಡೆಯುವುದಕ್ಕೆ ತಿಂಗಳಲ್ಲಿ ಒಬ್ಬರಿಗಾದರೂ ಅನ್ನದಾನ ಮಾಡಬೇಕು.
ಸೂಚನೆ – 2: ಮೇಲ್ಕಂಡ ಸಿದ್ದರುಗಳ ಪೂಜೆ ಮಾಡಿದರೆ ನಮ್ಮಲ್ಲಿರುವ ದ್ವೇಷ, ಹೊಟ್ಟೆಕಿಚ್ಚು ಅಸೂಯೆ, ದುರಾಸೆ, ಕೋಪ, ಕಟುನುಡಿಗಳು ಮುಂತಾದ

ಅವಗುಣಗಳು ಹೋಗುತ್ತವೆ. ಮತ್ತು ಬೇರೆಯವರನ್ನು ಗೌರವಿಸಿ ಬಾಳಬೇಕೆಂಬ ಯೋಚನೆಯುಂಟಾಗುತ್ತದೆ. ನಾನು ಎಂಬ ಅಹಂಕಾರ ನೀಗುತ್ತದೆ.

ಬೇರೆಯವರ ಉಪಕಾರವನ್ನು ಮರೆಯಬಾರದೆಂಬ ತಿಳುವಳಿಕೆಯುಂಟಾಗುತ್ತದೆ. ಪರರನ್ನು ನಿಂದಿಸಬಾರದೆಂಬ ಅನಿಸಿಕೆಯುಂಟಾಗುತ್ತದೆ.
ಪರರ ನಿಂದನೆಗಳನ್ನು ಸಹಿಸಿಕೊಂಡು ಅವರನ್ನು ಕ್ಷಮಿಸುವ ಗುಣ ಬೆಳೆಯುತ್ತದೆ. ಮತ್ತು ಮನುಕುಲವು ದೇವರ ಮಕ್ಕಳೆಂದು ತಿಳಿಯುವ ಪಕ್ವತೆ

ಉಂಟಾಗುತ್ತದೆ. ಜಾತಿ, ಮತ, ದ್ವೇಷಗಳ ಬಗ್ಗೆ ಮಾತಾಡುವುದು ತಪ್ಪು ಎಂಬ ತಿಳಿವುಂಟಾಗುತ್ತದೆ.

ಎಲ್ಲವನ್ನೂ ಬಲ್ಲ ಉನ್ನತ ಕೃಪಾಜ್ಯೋತಿ (ಪ್ರಕಾಶ) ಎಲ್ಲಾ ಜೀವಿಗಳಲ್ಲೂ ಇರುತ್ತಾನೆ. ಆದ್ದರಿಂದ ದಿವ್ಯ ಕೃಪಾಜ್ಯೋತಿ ದೇವರ ಆಶೀರ್ವಾದ ಅಥವಾ

ಅನುಗ್ರಹ ಬೇಕೆಂದರೆ ಜೀವಕಾರುಣ್ಯದಿಂದಲೇ ಪಡೆಯಲು ಸಾಧ್ಯ ಎಂದರಿವಾಗುತ್ತದೆ. ಜೀವಕಾರುಣ್ಯವಿಲ್ಲವೆಂದರೆ
ಎಲ್ಲವನ್ನೂ ಬಲ್ಲ ದಿವ್ಯ ಕೃಪಾ ಜ್ಯೋತಿ ದೇವರ ಕೃಪೆ ತಿರುನಾವುಕ್ಕರಸರು ಪಡೆಯಲಾಗುವುದಿಲ್ಲ ಎಂಬುದನ್ನು ತಿಳಿಯಬಹುದು. ಆದ್ದರಿಂದ

ಜೀವಕಾರುಣ್ಯವನ್ನು ಬೆಳೆಸಿಕೊಳ್ಳೋಣ, ಮೋಕ್ಷ ಲಾಭವನ್ನು ಪಡೆದು ಸುಖವಾಗಿ ಜೀವಿಸೋಣ.

ಜನ್ಮ ಸಾಫಲ್ಯವನ್ನು ಪಡೆಯಲಿಚ್ಚಿಸುವವರು ಜೀವಹಾನಿ ಮಾಡದೆ, ಮಾಂಸಾಹಾರವನ್ನು ಸೇವಿಸದೆ ಮತ್ತು ಅನ್ನದಾನ ಮಾಡುವುದರಿಂದಲೂ ಗುರು

ಅಗಸರ್ ಪಾದಾರವಿಂದವನ್ನು (ಓಂ ಅಗತ್ತಿಯರ್ ಪಾದಾರವಿಂದಾಯ ನಮಃ) ಎಂದು ಬೆಳಿಗ್ಗೆ (ಪ್ರಾತಃ) 30 ನಿಮಿಷ, ಸಂಜೆ 30 ನಿಮಿಷ ನಾಮ ಜಪ

ಪೂಜೆಯನ್ನು ಮಾಡುತ್ತಾ ಬಂದಲ್ಲಿ ಹಲವು ಜನ್ನಗಳಲ್ಲಿ ಮಾಡಿದ ಪಾಪಗಳು ನೀಗಿ ಪುಣ್ಯ ಹೆಚ್ಚಾಗುತ್ತದೆ. ಜ್ಞಾನವು ಸಿದ್ದಿಸುವುದು, ಮರಣವಿಲ್ಲದ ಉತ್ತಮ

ಜೀವನ ದೊರಕುತ್ತದೆ.

ಗುರುಕೃಪೆಯನ್ನು ಬೇಡುವ ಎಸ್. 
ಷಣ್ಮುಖೇಶ್
ಸನ್ಸುರೈ ಕಂಪ್ಯೂಟರ್ 
ಬಿ.ಟಿ.ಎಮ್. ಲೇಔಟ್, ಬೆಂಗಳೂರು – 29, 
ದೂರವಾಣಿ : 98865 98494

ಓಂಕಾರ್ ಕುಡಿಲ್‌ರವರ ಅನ್ನದಾನಕ್ಕೆ ಕೊಡುಗೆ ಕೊಡಲು ಇಚ್ಚಿಸುವವರು ಚೆಕ್/ಡಿ.ಡಿ./ ಎಂ.ಓ.
(SRI AGATHIAR SANMARGA CHARITABLE TRUST)
payable at Thuraiyur or Trichy
ಎಂಬ ಹೆಸರಿಗೆ ತೆಗೆದು ಮೊದಲನೆ ಪುಟದಲ್ಲಿರುವ ವಿಳಾಸಕ್ಕೆ ಕಳುಹಿಸುವುದು.

Leave a Reply

Your email address will not be published. Required fields are marked *

Benifishers

Visit Today : 469
Total Visit : 201505

Arangar Arulurai

Jeeva Nadi Vaasippu

Annadanam Channel

Categories

Exit mobile version